ನಿರ್ಮಾಣದ ಜೊತೆಗೆ ವಿತರಣೆ ಆರಂಭಿಸಿದ ಮುನೀಂದ್ರ
Posted date: 21 Sun, Jan 2024 06:06:18 PM
ಚಿತ್ರರಂಗದಲ್ಲಿ ಕಳೆದ 15 ವರ್ಷಗಳಿಂದ  ನಿರ್ಮಾಣ ಸೇರಿದಂತೆ ವಿವಿಧ ವಲಯಗಳಲ್ಲಿ   ಅನುಭವ ಪಡೆದಿರುವ ಮನೀಂದ್ರ ಕೆ ಪುರ, ಇದೀಗ ನಿರ್ಮಾಣದ ಜೊತೆಗೆ ವಿತರಣಾ ಕ್ಷೇತ್ರಕ್ಕೂ ಕಾಲಿಟ್ಡಿದ್ದಾರೆ.
 
ಮಾಧ್ಯಮಿಕ ಎಂಟರ್ ಪ್ರೈಸಸ್ ಮೂಲಕ  ಗಾಂಧಿನಗರದಲ್ಲಿ ಹೊಸ ಕಛೇರಿ ಆರಂಭಿಸಿದ್ದು ಸದ್ಯದಲ್ಲಿಯೇ ತಮ್ಮ ಸಂಸ್ಥೆಯ ಮೂಲಕ ಮೂಲಕ ನಿರ್ಮಾಣ ಮಾಡುವ ಜೊತೆಗೆ ಚಿತ್ರರಂಗದಲ್ಲಿ ನಿರ್ಮಾಣ ಮಾಡಿ ವಿತರಣೆಗೆ ಪರದಾಡುವ ಮಂದಿಗೆ ನೆರವಾಗುವ ಉದ್ದೇಶದಿಂದ ವಿರತರಣಾ ಸಂಸ್ಥೆ ಶೀಘ್ರದಲ್ಲೇ ಆರಂಭ ಮಾಡಲಿದ್ದಾರೆ.

ಹೊಸ ಸಂಸ್ಥೆಯ ಆರಂಭಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಮ್ ಸುರೇಶ್, ಸೇರಿದಂತೆ ಹಲವು ಮಂದಿ ಪದಾಧಿಕಾರಿಗಳು ಆಗಮಿಸಿ ಮುನೀಂದ್ತ ಅವರ ಪ್ರಯತ್ಬಕ್ಕೆ ಶುಭ ಹಾರೈಸಿದ್ದಾರೆ.
ಶಾಸಕ ಹಾಗು ಮಾಜಿ ಸಚಿವ ಎಂ.ಕೃಷ್ಣಪ್ಪ, ನಿರ್ಮಾಪಕರಾದ ಕನಕಪುರ ಶ್ರೀನಿವಾಸ್, ಮಂಜುನಾಥ್ ಬಾಬು, ನಿರ್ದೇಶಕರಾದ ಶಶಾಂಕ್, ಅಲೆಮಾರಿ ಸಂತೂ, ನಟ ರಾಜವರ್ಧನ್,ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು, ಛಾಯಾಗ್ರಾಹಕ ಶೇಖರ್ ಚಂದ್ರು ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ ಮುನೀಂದ್ರ ಅವರ ಹೊಸ ಪ್ರಯತ್ನಕ್ಕೆ ಶುಭ ಕೋಡಿ ಚಿತ್ರರಂಗದ ಬಗ್ಗೆ ಕನಸು ಇಟ್ಟುಕೊಂಡು  ಬರುವ ಮಂದಿಗೆ ಸೂಕ್ತ ಮಾರ್ಗದರ್ಶನ ಸಲಹೆ ನೀಡಿ ಎಂದಿದ್ದಾರೆ.

ನಿರ್ಮಾಣ ಮತ್ತು ವಿತರಣೆ ಸಂಸ್ಥೆಗಳು ಇತ್ರೀಚೆಗೆ ಕನ್ನಡದಲ್ಲಿ ಹೆಚ್ಚು ಬರಬೇಕಾಗಿದೆ. ಜೊತೆಗೆ ವಿತರಣಾ ಕ್ಷೇತ್ರದಲ್ಲಿ ನಂಬರ್ ಸ್ಥಾನಕ್ಕೆ ಏರಿ ಹೊಸ ನಿರ್ಮಾಪಕತು,‌ನಿರ್ದೇಶಕರು, ಮತ್ತು ನಟರೂ ಸೇರಿದಂತೆ ಅನೇಕ ಮಂದಿಗೆ ಅನುಕೂಲವಾಗಲಿ ಎಂದಿದ್ದಾರೆ.
ಚಿತ್ರರಂಗದ ತವರು ಮನೆ ಗಾಂಧಿನಗರದಲ್ಲಿ ಹೊಸಬರು ಬದುಕು ಕಟ್ಡಿಕೊಳ್ಳಲು  ಬರುವ ಮಂದಿಗೆ ಉತ್ರಮ ಮಾರ್ಗದರ್ಶನ ಸಿಕ್ಕಿ ಎಲ್ಲರಿಗೂ ಅನುಕೂಲವಾಗಲಿ ಎನ್ನುವ ಸಲಹೆ ನೀಡಿದ್ದಾರೆ.

ಬಾಕ್  ಶೀಘ್ರದಲ್ಲೇ ನಿರ್ಮಾಣ  ಮಾದ್ಯಮಿಕ ಎಂಟರ್ ಪ್ರೈಸಸ್ ಮೂಲಕ ಸದ್ಯದಲ್ಲಿಯೇ ಹೊಸ ಹೊಸ ಕಥೆ ಮತ್ತು ಕಂಟೆಂಟ್ ಆಧಾರಿತ ಚಿತ್ರ ನಿರ್ಮಾಣ ಮಾಡಲಾಗುತ್ತದೆ. ಜೊತೆಗೆ ವಿತರಣೆ ಮಾಡಲಾಗುವುದು. ಈ ಮೂಲಕ ಚಿತ್ರರಂಗಕ್ಕೆ ಬರುವ ಮಂದಿಗೆ ಸೂಕ್ತ ಮಾರ್ಗದರ್ಶನ ಮಾಡಿ ಹೊರೆಯಾಗದಂತೆ ಕೆಲಸ ಮಾಡುವುದು ನಮ್ಮ ಉದ್ದೇಅಸ ಎಂದು ನಿರ್ಮಾಪಕ, ವಿತರಕ ಮುನೀಂದ್ರ ಕೆ.ಪುರ ಹೇಳಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed